ಸೋಮವಾರ, ಮಾರ್ಚ್ 12, 2012

ಜಾರಿತೇ ಮನ?

ಅಂಗಳದ ಬಾಗಿಲ ಗೋಡೆಗೆ ತಲೆಯಾನಿಸಿದ್ದೆ
ಅರಳಿದ ಒಂಟಿ ಗುಲಾಬಿಯಂದಕೆ ಮನಕರಗಿ
ಹಸಿರು ಪುಟಿದೆದ್ದ ಗೆಲ್ಲುಗಳಲಿ ಚೆಲುವ ಚಿಲುಮೆ!

ಕ್ಷಣ ನಕ್ಕೆ, ನಿನ್ನೆ ನೀರುಣಿಸಿದ ನೆನಪೊಳು
ಚುಚ್ಚಿದ ಮುಳ್ಳಿಗೆ ಕಿರುಬೆರಳಿನ ಗಾಯ-
ಮಾಸಿರಲಿಲ್ಲ, ಗುಲಾಬಿಯ ಮಂದಸ್ಮಿತ!

ನಗುತ್ತಾಳೆ ಎಳೆ ಪಕಳೆಗಳ ತುಟಿ ಬಿಚ್ಚಿ
ಸಹೋದರಿಯವಳೆನಗೆ ಸಂಬಂಧದೊಳು
ನೀರುಣಿಸಿ ಕಾಯ್ವ ಈ ಮನಸಿಗೆ!

ಗೋಡೆಗಾನಿಸಿದ ತಲೆ, ಮರೆವು ಕ್ಷಣ,
ನಲುಗುತ್ತಿದೆಯಲ್ಲಿ ಚೆಂಗುಲಾಬಿಯಧರ
ದುಂಬಿ ಹೀರುತ್ತಿದೆ ತುಟಿಯಿತ್ತು ಪರಾಗ!

ನಾ ಮರೆತ ಕ್ಷಣ ದುಂಬಿಗೇ ಮಧುರವೇ
ನಲುಗಿದೆಯೇ ಮಧುರ ಪಕಳೆಗಳು?
ಒಂದು ಹನಿ ಕಣ್ಣೀರು ಜಾರಿದಂತೆ ಅಲ್ಲಿ
ಗೋಡೆಯೂ ಹಾಡುತಿತ್ತು ದುಂಬಿಯಂತೆ!

1 ಕಾಮೆಂಟ್‌:

  1. ಈ ಕವಿತೆಯಲ್ಲಿರುವ ಇನ್ನೂ ಒಣಗದಿರುವ ಎಂಜಲು ರಸಗಳು ನನಗೆ ಕಾಣುತ್ತಿದೆ. ನೊಣಗಳು ಹಾರಾಡುತ್ತಿದೆ ಅಂದಾಗ ಅದು ಇನ್ನೂ ಹಸಿಯಾಗಿದೆ ಅನ್ನಿಸಿತು. ಈ ಗುಲಾಬಿಗೆ ಗೋಡೆಗಳೇಕೆ ಅಳಬೇಕು? ಎಂಜಲು ತಿಕ್ಕುವಾಗ ಗೋಡೆಗಳ ಯಾವ ಕೆಲಸದಲ್ಲಿ ತಲ್ಲೀನವಾಗಿದ್ದವು ಅನ್ನುವ ಪ್ರತಿಮೆ ಎದ್ದು ಕಾಣಬೇಕಿತ್ತು. ಹಾಗಂತ ಕವಿತೆ ಗುಲಾಬಿಯ ಪಕಳೆಗಳಂತೆ ಮೃದುವಾಗಿದೆ. ದಂಟಿನಷ್ಟೇ ನುಣುಪಾಗಿದೆ. ಒಂದೇ ಬೇಸರ ಈ ಗುಲಾಬಿ ಬಾಡಿದೆ. ಇನ್ನೆಂದಿಗೂ ನಗಲಾರದೆ. ಬೇಸರ ಅನ್ನುವುದಕ್ಕಿಂತ ಮೌನ ಸೂಕ್ತ ಉತ್ತರ.

    ಪ್ರತ್ಯುತ್ತರಅಳಿಸಿ