ಬುಧವಾರ, ಏಪ್ರಿಲ್ 4, 2012

ಒಲವ ದೀಪದ ಬೆಳಕ ಚೆಲ್ಲಿ!

ಇರುಳ ಹೊತ್ತ ಮನಕೆ ಒಲವ ದೀಪದ ಬೆಳಕ ಚೆಲ್ಲಿ
ಹಸಿರಾದೆ ನೀ ಗೆಳತೀ ಉಸಿರ ಮರೆತ ಬದುಕಿನಲಿ
ಮತ್ತುಸಿರ ತಂದಿತ್ತು, ಮುತ್ತುಗಳ ಹಿತವಿತ್ತು ನಗುವಿನಲಿ!

ನಿನ್ನ ಮಾತಿನ ಬಳುಕಿನಲಿ ನನ್ನ ದುಗುಡಗಳ ದೂರಸರಿಸಿ
ಒಂಟಿ ಬಾಳಿನ ಒಸರಿಗೆ ಜೊತೆಯಾಗಿ ತೊರೆಯಾದೆ
ಪ್ರೀತಿ ಹರಿವ ನೀರಲ್ಲಿ ನಿನ್ನೊಳಗೆ ನನ್ನ ಬೆರೆಸಿ!

ಅರಳಿ ನಿಂತಿತು ಪ್ರೀತಿಯೊರತೆ ಕಾಣದ ಬರಡು ತುಟಿ
ಅದು ನಿನ್ನ ಪ್ರೇಮ ಲೇಪನದ ಹಿತದಾಲಿಂಗನದೊಳಗೆ
ಹೃದಯಕ್ಕಂಟಿದ ನೋವ ಮರೆಸಿ ಮನ ಭಾವಸ್ಪುರಣ!

ಹಾತೊರೆವೆ ಅನುದಿನವೂ ನಿನ್ನೊಲವ ಸಿಂಚನಕೆ
ಒಲ್ಲೆಯೆನದಿರು ನಲ್ಲೆ ಒಲವ ದೀಪದ ಬೆಳಗಿಗೆ
ಜತೆಯಾಗಿ ಕೈ ಹಿಡಿದು ಬೆಳಗೋಣ ಬಾ ಬದುಕ!
===
ಚಿತೃಕೃಪೆ: ಮೈಅಪೆರಾ.ಕಾಮ್

2 ಕಾಮೆಂಟ್‌ಗಳು:

  1. ಕಾವ್ಯದಲ್ಲಿ ಲಯದ ಬಗ್ಗೆ ಮತ್ತು ಅದರಲ್ಲಿ ಭಾವ ಬಿಗಿತದ ಬಗ್ಗೆ ಮಾತಾಡಬೇಕು ಅನ್ನಿಸಿತು.ಏಕೆಂದರೆ ,ಸಂಗೀತದ ಮಾದುರ್ಯ ಮತ್ತು ಅದೇ ಮಾಧರಿಯ ಕವಿತೆಯಲ್ಲಿ ಹಾಗೆ ಕುಳಿತುಕೊಳ್ಳಬೇಕು . ಒಂದು ಪಕ್ಷ ಇದೇ ನಿಮ್ಮ ಕವಿತೆಯನ್ನು ಗೀತೆಗೆ ತೆಗೆದಾಗ ಬರುವ ಅಧಿಕ ಪದಗಳ ಭಾರವನ್ನು ಗಮನಿಸುತ್ತೇನೆ. ಓದುವಾಗ ಹಾಗೆ ಅನ್ನಿಸಲೇ ಬಾರದು. ನಿಮಗೆ ಸರಿಯೆನಿಸಿದ ಯಾವುದೇ ಕವಿತೆಯನ್ನು ಅದರದ್ದೇ ಧಾಟಿಯಲ್ಲಿ ಸಂಗಿತದಲ್ಲಿ ಗುನುಗಿಸಿದಾಗ ಇದರ ವ್ಯತ್ಯಾಸ ಗೊತ್ತಾಗುವುದು. ಈ ಕವಿತೆಯಲ್ಲಿ ನಿಮ್ಮ ಭಾವ ಚೆನ್ನಾಗಿದೆ. ಪದಗಳು ಸಾಧ್ಯವಾದಷ್ಟು ಕಡಿಮೆ ಮಾಡಿ, ಕೆಲವೇ ಗಟ್ಟಿ ಪದಗಳಲ್ಲಿ ಭಾವವನ್ನು ಲಯದಲ್ಲಿ ಕಂಡುಕೊಳ್ಳಲು ಕೋರಿಕೆ. ಮೊತ್ತ ಮೊದಲನೆಯದಾಗಿ ಎಲ್ಲಾರೂ ಬರೆಯುತ್ತಿದ್ದಾರೆ , ನಾನು ಬರೆದು ಪ್ರಕಟಿಸಿ ಬಿಡುತ್ತೇನೆ ಅನ್ನುವ ಅವಸರ ಬೇಡ. ನಿಧಾನವಾದರೂ ಚಿಂತಿಲ್ಲ. ದಿನಗಳು ಕಳೆದರೂ ಚಿಂತಿಲ್ಲ. ಅನುದಿನ ನೆನಪಿಡುವ ಭಾವದ ಕವಿತೆಗೆ ಪ್ರಯತ್ನಿಸಿ. ಕವಿತೆ ಅವಸರದಲ್ಲಿ ಹುಟ್ಟುವುದಿಲ್ಲ. ನೆನಪಿರಲಿ.

    ಪ್ರತ್ಯುತ್ತರಅಳಿಸಿ