ಭಾನುವಾರ, ಸೆಪ್ಟೆಂಬರ್ 23, 2012

ಒಣಹುಲ್ಲು ಮತ್ತು ಮರಳಿ ಬಂದವರು!

ಮರಳಿ ಬಂದಿದೆ ನನ್ನ ಕರುವು ಮನೆಬಾಗಿಲಿಗೆ
ಹಗ್ಗವಿಲ್ಲದ ಬರಿದು ಕುತ್ತಿಗೆ ರೋಮವಿಲ್ಲದೆ,
ನೆತ್ತರು ಬತ್ತಿರಬಹುದು ಒಡಲೊಳಗೆ, ದೇವಬಲ್ಲ!

ಮೂರುತಿಂಗಳ ಬದುಕು ಅಮ್ಮನಿಲ್ಲದ ಬೇಗೆ
ಕಾಡಪೊದೆಯೊಳಗೆ ಕತ್ತಲೊಳು ನರಳಾಟ
ಹೆತ್ತವರವರೇ? ನಿನ್ನ ಮಗುವೆನಲು ಹಾಲುಣಿಸಿ?

ಬೆತ್ತಲಾಗಿದೆ ಮನವು ನನ್ನ ಕರುವಿನದು
ಎತ್ತಿ ಮುದ್ದಾಡಲು ಕಸುವಿಲ್ಲ, ಮುದಿಗೂಬೆ
ಬತ್ತಿದೆ ಕೆಚ್ಚಲು, ಹಾಲುದುರದೆ ಬರಿನೆತ್ತರು!

ಮಗುವೇ, ಮತ್ತೆ ಹೋಗದಿರು ಹುಲಿಪೊದೆಗೆ
ಮುಖವಾಡ ಹೊತ್ತವರಿಹರು ಹಲ್ಲುನಂಜು!
ನೀರ ಕುಡಿ ತೊರೆಯ ಗುಂಡಿಯಲಿರೆ ಹನಿ
ಒಣಹುಲ್ಲ ಎಸಳಿದೆ ಎನ್ನ ಬಳಿ ನಿನ್ನನುಣಿಸಲು!
=====
ಚಿತ್ರಕೃಪೆ: ಗೂಗಲ್ ಇಮೇಜಸ್


2 ಕಾಮೆಂಟ್‌ಗಳು:

  1. ತಪ್ಪಿಸಿಕೊಂಡ ಕರು ಕೊಟ್ಟಿಗೆಗೆ ವಾಪಸ್ಸಾದಾಗ, ಅಮ್ಮ ಪ್ರಶ್ನಿಸಲು ಹೊರಡುವುದೇ ಇಲ್ಲ. ಬರೀ ಗಾಯಗಳಿಗೆ ಆರೈಕೆ.

    ಹೂವಪ್ಪಾ ಅಮೋಘವಾದ ಕವನ.

    ಪ್ರತ್ಯುತ್ತರಅಳಿಸಿ
  2. ನೋವಿನ ಕವನ... ಪ್ರತಿ ಪದಕ್ಕೂ ಸಹಜತೆಯಿದೆ ನಾವೇ ಮುಳುಗೆದ್ದು ಬಂದಹಾಗಾಯ್ತು... ಮೂರು ತಿಂಗಳ ನಂತರ ಬಂದ ಕರುವಿಗೆ ಅಗಲಿಕೆಯ ಜೊತೆಗೆ ಬತ್ತಿರುವ ಕೆಚ್ಚಲಿಂದ ಒಣಹುಲ್ಲೇ ಗತಿಯಾಯ್ತು!

    ಪ್ರತ್ಯುತ್ತರಅಳಿಸಿ