ಮಂಗಳವಾರ, ನವೆಂಬರ್ 6, 2012

ಕಾದವರು!

ತೆರೆದವರಾರು ಕದವ
ಕರುಣೆಯಿರದ ನೋವ
ಬರಮಾಡಿ ಸೆಳೆದು?

ಹೊರದೂಡದಿರಲೆನ್ನ
ಹರುಕುಗೊಳಿಸಿ ಬಾಳ-
ಬಾಣಲೆಯಲಿ ಹುರಿದು!

ಬರದ ಬಿಸಿಯನೀಯೆ
ಬರಡು ಮರುಭೂಮಿ
ನೀರ ಕಾಣುವೆನೆಲ್ಲಿ?

ಕೊರಗು ಎನಗಿತ್ತು
ಪೊರೆವ ಮನಸಿರದೆ
ಕಠಿಣನೇಕೆ ಕಣ್ಣಮುಚ್ಚಿ?

ಕರೆದುಕೋ ಅಕ್ಕರದಿ
ನಿನ್ನ ಬಳಿ ಬಿಗಿದಪ್ಪಿ
ಬವಣೆ ಕೊನೆ ಜಗದಿ
ಅತಿ ಕಾದ ಮನಕೆ!

====
ಚಿತ್ರಕೃಪೆ:
en.sanofi.com


3 ಕಾಮೆಂಟ್‌ಗಳು:

 1. ಮಕ್ಕಳಿಗೆ ಅವರ ಬಾಲ್ಯದಲ್ಲಿ ಸಮಸ್ತ ಸುಖಗಳು ಸಿಗುವಂತಾಗಬೇಕು.

  ಪ್ರತ್ಯುತ್ತರಅಳಿಸಿ
 2. ಬಡತನವ ಬೇಯಿಸಿದ , ಬೇಯಿಸುವ ಕವನ..
  ಸೊಗಸಾಗಿದೆ...

  ಪ್ರತ್ಯುತ್ತರಅಳಿಸಿ
 3. ಕಾದವರನ್ನು ಎಷ್ಟರ ಮಟ್ಟಿಗೆ ಕಾಯಿಸಿದ್ದೀರಿ ಎಂದು ಕವಿತೆಯ ಒಳಗಿಣುಕಿದ, ಕ್ಷಣವನ್ನೂ ಕಾಯಿಸದೆ ಕಾದವರ ಒಡಲನ್ನು ತೆರೆದಿಟ್ಟಿತು ಕವಿತೆ.. ಈ ರೀತಿಯ ಸುರುಳಿ ಸುತ್ತಿಕೊಂಡಂತಹ ನಿರೂಪಣೆ ನಿಮ್ಮ ಬರವಣಿಗೆಯ ಆಸ್ತಿ, ಇತ್ತೀಚಿನ ನಿಮ್ಮ ಕೆಲವು ಕವಿತೆಗಳಲ್ಲಿ ಅ ರೀತಿಯ ಪೂರ್ಣ ಪ್ರಮಾಣದ ಅಭಿವ್ಯಕ್ತಿಯನ್ನು ಗಮನಿಸಲಾಗಿರಲಿಲ್ಲ.. ನನ್ನೊಳಗಿನ ಓದುಗನನ್ನು ತಣಿಸಿದ ಯಶಸ್ಸು ನಿಮ್ಮ ಕವಿತೆಯದು.. ಮೆಚ್ಚುಗೆಯಾಯ್ತು ಪುಷ್ಪಣ್ಣ :)

  ಪ್ರತ್ಯುತ್ತರಅಳಿಸಿ