ಬಯಲಿಗಿಳಿದಿದ್ದೇವೆ ಬರಡಿಲ್ಲ ನೆಲ!
ಮೊಳೆತಿರಬಹುದಲ್ಲಿ ಹಸಿರಚಿಗುರು,
ಮೋಡಗಳಲ್ಲಿ ಹನಿಯಾಗಿ ಮುತ್ತಿಕ್ಕಿ!
ಹರಿವ ತೊರೆಗಳ ದಾಟಿ ಜಿಗಿದು
ನಡುವ ಬೇಲಿಯೊಳು ನುಸುಳಿ
ಹುಡುಕಬೇಕಲ್ಲಿ ಬದುಕ ಮುಗುಳ,
ಮಣ್ಣೊಳಗಿಂದೆದ್ದ ಮೆಲ್ಲುಬಳ್ಳಿ!
ಮೆರೆಯುವಂತಿಲ್ಲ ಬರಿಯ ನಡೆಯಲ್ಲಿ
ಮರೆಯಾಗಬಹುದುಸಿರು ಬಳಲಿ,
ಮರಿಯಾಸೆ ಮನದೊಳಗೆ ಮರಳಿ,
ಹೊರಳಿಯಿರಬಹುದೆಂಬ ಹರುಷದಲಿ!
=====

ಅವಶ್ಯಕತೆಗಳು ಜೀವಿಯನ್ನು ಕೆಲಸಕ್ಕೆ ಹಚ್ಚುತ್ತವೆ. ಹಸಿವಿನ ಅಗಾಧತೆ ಹರಿವ ತೊರೆಗಳ ದಾಟಿ ಜಿಗಿಸುತ್ತೆ ನಮ್ಮನ್ನೂ...
ಪ್ರತ್ಯುತ್ತರಅಳಿಸಿಚೆಂದ ಇದೆ ಪುಷ್ಪಣ್ಣ.. ಬಹುದಿನಗಳ ನಂತರ ನಿಮ್ಮ ಬ್ಲಾಗಿಗೆ ಭೇಟಿ ನೀಡುತ್ತಿದ್ದೇನೆ.. ಖುಷಿಯಾಯ್ತು..
ಪ್ರತ್ಯುತ್ತರಅಳಿಸಿ