ಮೆತ್ತಗೆ ಚಿಂತಿಸುತ್ತಾ ಕೂತೆ, ಮಣ್ಣು ಯಾರದ್ದು?
ಗೆದ್ದೆನೆನಬಹುದು ನಾಗರ ನಾಲಗೆಯ ಹೊರಚಾಚಿ,
ಗೆದ್ದಲನು ನೆನಪಿನೆದೆಯೊಳಗಿಟ್ಟರೆಕ್ಷಣ ನಕ್ಕೆ!
ಹರಿಸಿ ಬೆವರನು ಬೆರೆಸಿ ಜೊಲ್ಲ ಮುದ್ದೆಗೈದು
ಕೊರೆದು ನೆಲವನು ಮಣ್ಣ, ಮೇಲೆತ್ತಿ ಗೂಡ
ಬದುಕಬೇಕೆನುವಾಗ ನುಸುಳುವವನಿಲ್ಲಿ ವಿಷ!
ಹೆಡೆಯೆತ್ತಿ ನಿಲುವುದಕೆ ಶ್ವಾಸ ಸಾಲುವುದಿಲ್ಲ
ಹಾವಹಲ್ಲ ಗಾತ್ರದ ಜೀವವು, ತೂತ ತೊರೆದು
ತೆರಳಬೇಕಲ್ಲಿ, ಉರಗದುದರದಿ ಉರಿವ ಮೊದಲು!
ಹೆಸರೆನಿತು ಬಲುಜೋರು, ಹೆಡೆಬಿಚ್ಚುವವರಿಗೆ,
ಮುರಿಯದಿದ್ದರೂ ಮೈ, ಬಲದೊಳಗೆ ಹುದ್ದೆ!
ಗೆದ್ದಲ ಗೆಲುವೇ? ಇಲ್ಲ, 'ಶೇಷ' ಸೋಲು ಎನಲೇ?
==
ಚಿತ್ರಕೃಪೆ: ಗೂಗಲ್ ಇಮೇಜಸ್

ಯಾರದೋ ಶ್ರಮಕ್ಕೆ ಯಾರಿಗೋ ಪ್ರಾಶಸ್ತ್ಯ! ನನಗೂ ಸಾಕಾಗಿ ಹೋಗಿದೆ ಗೆಳೆಯ.
ಪ್ರತ್ಯುತ್ತರಅಳಿಸಿಶ್ರಮಕ್ಕೆ ಬೆಲೆಯಿಲ್ಲ, ಮೋಸ ಮಾಡಿ ಬದುಕುವವರದೆ ಈಗ ಕಾರುಬಾರು...
ಪ್ರತ್ಯುತ್ತರಅಳಿಸಿಬದರಿ ಸರ್ ಹೇಳಿದಂತೆ "ಯಾರದೋ ಶ್ರಮಕ್ಕೆ ಯಾರಿಗೋ ಪ್ರಾಶಸ್ತ್ಯ!"
ಅರ್ಥಪೂರ್ಣ ಕವನ! ಚೆನ್ನಾಗಿದೆ ಸರ್
http://kavyasparsha.blogspot.in/