ಸೋಮವಾರ, ಜೂನ್ 16, 2014

ವಾಸ್ತವ?

ಅಪ್ಪ ತುಂಬಿ ತುಳು-
ಕಾಡುತಿದ್ದಾನೆ ಇಂದು
ಎಲ್ಲರ ಮನದ ಗೋಡೆಯಲ್ಲೂ
ಎಲ್ಲರ ಮುಖದ ಮೇಲೂ,
ವಾಲಲಿ ಹೀಗೆ ಪ್ರೀತಿ
ಪ್ರತಿದಿನವೂ ಎಂದರೆ ತಪ್ಪು,
ಅವರವರ ದಿನ ಬಂದಾಗ
ಮಾತ್ರ ಅವರವರ ನೆನಪು,
ಮರುದಿನ ಅಪ್ಪನಿರುತ್ತಾನೆಯೆ?

ಇವತ್ತು ಅಪ್ಪ ಬಂದಿದ್ದಾರೆ
ಗೋಡೆಯ ಮೇಲೆ ಪ್ರೀತಿ ವಾಲುತ್ತಿದೆ,
ನಾಳೆ ಅಪ್ಪ ಅದೇ ಗದ್ದೆಯ ಬದುಗಳಲ್ಲಿ
ಕಾಲಿಗೆ ಕೆಸರು ಮೆತ್ತಿಕೊಂಡು
ಒಂದೆರಡು ತೆಂಗೋ, ಅಡಿಕೆಯನ್ನೋ
ಹೆಕ್ಕುತ್ತಾ ಎಂದಿಗೂ ವಾಲದ ಪ್ರೀತಿಯ
ಅರಿವಿಲ್ಲದೆ ಆಕಾಶ ನೋಡುತ್ತಾನೆ,
ಮಳೆ ಸುರಿಯುತ್ತದೆ, ನೇಗಿಲಿನ ನೆನಪಲಿ
ಕೆಸರಿನ ರುಚಿಗೆ ಹಾತೊರೆಯುತ್ತಾನೆ,
ಎತ್ತು ಸಾಥ್ ನೀಡುತ್ತಿದೆ, ಹನಿಗಳ(?) ಜೊತೆ!

ಇತ್ತ ಮಗನ 'ಅಪ್ಪ ಐ ಲವ್ ಯೂ'ಗೆ
ಕಮೆಂಟುಗಳ ಮಹಾಪೂರ, ಲೈಕಿನ ಸುರಿಮಳೆ

ಕೊನೆಗೊಮ್ಮೆ ಲ್ಯಾಪ್ಟಾಪ್ ಮುಟ್ಟಿದ ಮಗನ
ಪಾಪವನು ಡೆಟ್ಟಾಲ್ ಸ್ಯಾನಿಟೈಸರಿನ ಬುರುಗು
ತೊಳೆದು ಬಿಡುತ್ತದೆ ಕ್ಷಣಮಾತ್ರಕೆ!

ಅಲ್ಲಿ ಅಪ್ಪ ಸುಸ್ತಾಗಿ ಹರಿವ ತೊರೆನೀರಿನ
ತಂಪಿನಲಿ ಮುಖವರಳಿಸುತ್ತಾನೆ, ಖುಶಿಯಲಿ
ಮಳೆ ಹನಿ ಕಮೆಂಟಿಸುತ್ತಲೇ ಇರುತ್ತದೆ!

3 ಕಾಮೆಂಟ್‌ಗಳು:

 1. ವಾಸ್ತವವನ್ನು ಮನ ಮುಟ್ಟುವಂತೆ ತೆರೆದಿಟ್ಟೀದ್ದೀರ ಸಾರ್

  ಪ್ರತ್ಯುತ್ತರಅಳಿಸಿ
 2. hO nimduke blog kooDa ideyO??/ thank you for the comment. :-)
  melina kavite reflects reality..:-(. good one!!
  Malathi S

  ಪ್ರತ್ಯುತ್ತರಅಳಿಸಿ
 3. ಕನ್ನಡಕ್ಕೆ 99 %, ಇತರೆ ಭಾಷೆಗೆ 1%, ಸದ್ಯಕ್ಕೆ ವಿಕ್ಷಕರು : 23621+......
  http://spn3187.blogspot.in
  ..
  ಹೊಸದರ ಹುಡುಕಾಟದ ಕಡೆಗೆ..............

  ಪ್ರತ್ಯುತ್ತರಅಳಿಸಿ