ಶನಿವಾರ, ಡಿಸೆಂಬರ್ 10, 2011

ತೃಪ್ತಿ!

ತಟ್ಟೆಯೊಳಗನ್ನ, ಒಂದು ಕ್ಷಣ ಮೌನ
ನೆಕ್ಕಲುಪ್ಪಿನ ಕಾಯಿ, ಹುಳಿ ಮೊಸರು!

ಹೊರಗೊಂದು ನಾಯಿ ಬಾಗಿಲ ಮುಂದೆ
ಎಲುವ ತಿನ್ನುವ ತವಕ, ಬೇಡುತ್ತಿದೆ ಕಣ್ಣಲಿ

ಹೊಟ್ಟೆ ಚುರುಗುಡುತಿತ್ತು, ಹಸಿವೆಯ ಬೆಂಕಿ
ನಾಲಗೆಯ ತುಂಬೆಲ್ಲಾ ಜೊಲ್ಲು, ನಾಯಿಯಂತೆ!

ಮುಷ್ಟಿಯಲಿ ತುತ್ತು, ತುಂಡು ಉಪ್ಪಿನಕಾಯಿ
ಬಾಡಿದ್ದ ಕರುಳು ಹೊಟ್ಟೆಯೊಳಗೆ ನರ್ತನ!

ತಟ್ಟೆಯೆತ್ತಿ ನಡೆದೆ, ಬಾಲ ಅಲುಗಾಡಿಸಿತ್ತು
ಕಚ್ಚಲು ಎಲುಬಿಲ್ಲದಿದ್ದರೂ ಅನ್ನದಗುಳಿತ್ತು!

ತಿಂದು ತೇಗಿ ಮೂಗಿಗೆ ನಾಲಗೆ ಒರೆಸಿ
ಒಂದು ದೃಷ್ಟಿ! ತೃಪ್ತಿ, ನನಗೂ ನಾಯಿಗೂ!

===
ಚಿತ್ರಕೃಪೆ: ಗೂಗಲ್ ಇಮೇಜಸ್

4 ಕಾಮೆಂಟ್‌ಗಳು:

  1. ಒಂದು ಸುಂದರ ಪ್ರತಿಮೆಯೊಂದಿಗೆ ಹಸಿವು-ತೃಪ್ತಿಯ ಕಲ್ಪನಾ ವಿಲಾಸವು ಕವಿ ಭಾವಕ್ಕೆ ಪುಷ್ಟಿಯೊದಗಿಸಿ ಕವನ ರಚನೆಗೆ ಪ್ರೇರೇಪಿಸಿದೆ.ತುಂಡು,ಉಪ್ಪಿನಕಾಯಿ,ಮೊಸರು,ಎಲುಬು ಇತ್ಯಾದಿಗಳೆಲ್ಲ ಸಾಂದರ್ಭಿಕ ಪ್ರತಿಮೆಗಳಾಗಿವೆ.ಆದರೆ ಕವಿಯ ದೃಷ್ಠಿಕೋನ ಮಾತ್ರ ಹತ್ತು ಹಲವು ಮುಖ ಹೊದ್ದು ರೂಪು ತಾಳಿರುವಂತದ್ದು..ಹಸಿವು ನಾಯಿಗೂ ಒಂದೇ,ನರನಿಗೂ ಒಂದೇ.ಅದ ನೀಗಿಸಿಕೊಂಡು ಆತ್ಮ ಸಂತೃಪ್ತಿ ಪಡುವ ಬಗೆಯೇ ಈ ಕವನದ ಆಶಯ.

    ಪ್ರತ್ಯುತ್ತರಅಳಿಸಿ
  2. ನಮ್ಮ ಮನೆ ವೆರಾಂಡಲ್ಲಿ ಹಲವು ಹಕ್ಕಿಗಳು ಹೀಗೆ ಚಿಲಿಪಿಲಿ ಗುಟ್ಟುತ್ತವೆ.ನನ್ನ ನೋಡದಿದ್ದರೆ ಕಿಟಕಿವರೆಗೂ ಬಂದು ಎದೆ ಕಿಟಕಿ ತಟ್ಟುತ್ತದೆ. ನಿಮ್ಮ ಭಾವಾಭಿವ್ಯಕ್ತಿಗೆ ನನ್ನ ಒಂದು ತುತ್ತು ಅನ್ನ ದಿನವೂ ಹಕ್ಕಿಗಳಿಗೆ ಹೋಗುತ್ತವೆ. ಭಾವಗಳು ರಾತ್ರಿ ಮಲಗಿ ಬೆಳಗ್ಗೆ ಎದ್ದು, ನಮ್ಮೊಂದಿಗೆ ಬೆರೆತ ಕ್ಷಣಗಳಿಗೆ ಮೀಸಲಾಗುವಾಗ ದಿನದ ಬದುಕು ನಮ್ಮ ಬದುಕು ಭಾಷ್ಯ ಬರೆಯುವುದು ಹೀಗೆ ನಿಮ್ಮ ಕವಿತೆಯ ಹಾಗೇ.ಹೆಣ್ಣು-ಗಂಡಿನ ಪ್ರೀತಿ ಅನಿವಾರ್ಯ.ಆದರೆ ಅದಕ್ಕೆ ಬೆಸೆದುಕೊಂಡಿರುವ ಇನ್ನೊಂದು ಅವಿಭಾಜ್ಯ ಮಿಡಿತವನ್ನು ತಿನ್ನುವ ತಟ್ಟೆಯಿಂದ ಹಿಡಿದು ಮಲಗುವ ಮಂಚದವರೆಗೆ ವಿಸ್ತರಿಸುವುದು ಕಾವ್ಯ. ನಾಯಿಗೂ ಒಂದು ಬದುಕು,ಅದರ ಹಸಿವಿವ ರೀತಿಯೆ ಬೇರೆ. ಮನುಷ್ಯನಿಗೂ ಒಂದು ಬದುಕು ಅವನ ಹಸಿವಿನ ಮುಖಗಳು ಹಲವು. ಮೂಳೆಯಿಲ್ಲದಿದ್ದರೂ ನಾಯಿ ನಿಮ್ಮ ಪ್ರೀತಿಗೆ ನಿಯತ್ತು ತೋರಿಸಿದ್ದು ಕವಿತೆ ಭಾವಗಳನ್ನು ಎತ್ತಿ ಹಿಡಿಯಿತು. ಸುಂದರವಾಗಿದೆ.

    ಪ್ರತ್ಯುತ್ತರಅಳಿಸಿ
  3. ನಮ್ಮ ಮನೆ ವೆರಾಂಡಲ್ಲಿ ಹಲವು ಹಕ್ಕಿಗಳು ಹೀಗೆ ಚಿಲಿಪಿಲಿ ಗುಟ್ಟುತ್ತವೆ.ನನ್ನ ನೋಡದಿದ್ದರೆ ಕಿಟಕಿವರೆಗೂ ಬಂದು ಎದೆ ಕಿಟಕಿ ತಟ್ಟುತ್ತದೆ. ನಿಮ್ಮ ಭಾವಾಭಿವ್ಯಕ್ತಿಗೆ ನನ್ನ ಒಂದು ತುತ್ತು ಅನ್ನ ದಿನವೂ ಹಕ್ಕಿಗಳಿಗೆ ಹೋಗುತ್ತವೆ. ಭಾವಗಳು ರಾತ್ರಿ ಮಲಗಿ ಬೆಳಗ್ಗೆ ಎದ್ದು, ನಮ್ಮೊಂದಿಗೆ ಬೆರೆತ ಕ್ಷಣಗಳಿಗೆ ಮೀಸಲಾಗುವಾಗ ದಿನದ ಬದುಕು ನಮ್ಮ ಬದುಕು ಭಾಷ್ಯ ಬರೆಯುವುದು ಹೀಗೆ ನಿಮ್ಮ ಕವಿತೆಯ ಹಾಗೇ.ಹೆಣ್ಣು-ಗಂಡಿನ ಪ್ರೀತಿ ಅನಿವಾರ್ಯ.ಆದರೆ ಅದಕ್ಕೆ ಬೆಸೆದುಕೊಂಡಿರುವ ಇನ್ನೊಂದು ಅವಿಭಾಜ್ಯ ಮಿಡಿತವನ್ನು ತಿನ್ನುವ ತಟ್ಟೆಯಿಂದ ಹಿಡಿದು ಮಲಗುವ ಮಂಚದವರೆಗೆ ವಿಸ್ತರಿಸುವುದು ಕಾವ್ಯ. ನಾಯಿಗೂ ಒಂದು ಬದುಕು,ಅದರ ಹಸಿವಿವ ರೀತಿಯೆ ಬೇರೆ. ಮನುಷ್ಯನಿಗೂ ಒಂದು ಬದುಕು ಅವನ ಹಸಿವಿನ ಮುಖಗಳು ಹಲವು. ಮೂಳೆಯಿಲ್ಲದಿದ್ದರೂ ನಾಯಿ ನಿಮ್ಮ ಪ್ರೀತಿಗೆ ನಿಯತ್ತು ತೋರಿಸಿದ್ದು ಕವಿತೆ ಭಾವಗಳನ್ನು ಎತ್ತಿ ಹಿಡಿಯಿತು. ಸುಂದರವಾಗಿದೆ.

    ಪ್ರತ್ಯುತ್ತರಅಳಿಸಿ
  4. ನಾಯಿ-ಹಸಿವು ಎಲ್ಲ ಸುಂದರವಾಗಿ ಮೇಳೈಸಿ ಕವಿತೆ ಕಳೆಗಟ್ಟಿದೆ

    ಪ್ರತ್ಯುತ್ತರಅಳಿಸಿ