ಕೊಂಚ ಹನಿ ನೀರ ಹೊತ್ತ ಒಂಟಿ ಒಯಸಿಸ್ ನಾನು
ಮೂವತ್ತಾರು ಮೈಲಿಯ ಮರುಭೂಮಿಯೊಳಗೆ
ಎಲ್ಲೆಲ್ಲೂ ಮರಳೇ, ಕಣ್ಣು ಹಾಯಿಸಿದಷ್ಟೂ ದೂರ!
ಮೇಲೆ ಕೆಲವೊಮ್ಮೆ ನೀಲ ಬಾನು ಕೂಡ
ಬಿಳಿಮೋಡಗಳ ನಗುವ ಹೊತ್ತು, ನನಗಣಕಿಸಿ
ಮತ್ತೆ ನೀಲಿಯಾಗುತ್ತವೆ ಬರಿಯ ಸೂರ್ಯನ
ಬಿಸಿಯುಸಿರ ಗಾಳಿ ಬಿಟ್ಟು, ಮರಳು ಮತ್ತಷ್ಟು ಬಿಸಿ!
ಒಂಟೆಯ ನಾಲಗೆಗೂ ರುಚಿಯೇನೋ, ಕೆಲವೊಮ್ಮೆ
ನೀರ ಡಿಬ್ಬ ತುಂಬಿಸಿ ನಗುತ್ತದೆ, ಮೂಟೆಗಳ ಹೊತ್ತು
ಪಯಣ ಸಾಗುತ್ತದೆ, ಬಿಸಿಮರಳ ಬೇಗೆಯಲಿ....
ನನಗೂ ನಗುವೂ, ನೆನೆಯುತ್ತೇನೆ ಒಂಟೆಯನು,
ಹದಿನೈದು ದಿನದ ದಾಹನೀಗಿಸಿದ ತೃಪ್ತಿಗೆ!
ಮರೆಯಾಗುತ್ತದೆ ಕುಳಿರ್ಗಾಳಿ ಮರಳ ಕಸ-ಕಡ್ಡಿಗಳ
ಪುಡಿ ಎರಚಿ ಹನಿನೀರ ಹೊತ್ತ ನನ್ನೆದೆಯೊಳಗೆ
ಕಸದಕುಣಿಕೆಯೊಳಗೆ ಮತ್ತೆ ಕಾಯುತ್ತೇನೆ
ಆಸೆ ಮರೀಚಿಕೆಯ ಹೊತ್ತು, ಮತ್ತೊಂದು
ಒಂಟೆ ಬರಬಹುದೆಂದು, ಹನಿನೀರ ನಾ ಉಣಬಡಿಸಬಹುದೆಂದು!
ಆಳಕ್ಕೆ ಇಳಿದಾಗ ಮರಳುಗಾಡಿನಲ್ಲಿ ನಡೆದದ್ದು ಗೊತ್ತಾಗಲೇ ಇಲ್ಲ. ಅದು ೩೬ ಮೈಲು. ಅಲ್ಲೆಲ್ಲೋ ಕಂಡ ಓಯಸಿಸ್ ನೀರು ಬಾಯಾರಿಕೆ ತಣಿಸಿದ೦ತಿದ ಈ ಕವಿತೆ.ಹಂಚಿಕೊಂಡಿದ್ದಕ್ಕೆ ಅನಂತ ವಂದನೆಗಳು. ಈಗ ನನ್ನ ನೋಟ ಇನ್ನಷ್ಟು ದೂರ ನಡೆದಾಗ ಹಸಿರ ಕಾನನ ಕಾಣಬಹುದು.
ಪ್ರತ್ಯುತ್ತರಅಳಿಸಿಪುಷ್ಪಣ್ಣ ಮೊದಲು ನಿಮ್ಮದೊಂದು ಕವನ ಸಂಕಲನ ಹೊರತನ್ನಿ ಮಾರಾಯ್ರೆ.. ನಾನೇ ಮೊದಲು ಪುಸ್ತಕ ಕೊಳ್ಳುತ್ತೇನೆ.. ಎಂತಹ ಉಪಮೆಗಳು ಎದ್ದು ನಿಂತಿವೆ ಎಂದರೆ ಕೆಲವು ದಿನಗಳಿಂದ ಯಾವುದೇ ಕವನ ಮನಸಾರೆ ಆಸ್ವಾದಿಸದ ನನ್ನ ಮನವನ್ನು ಸಂಪೂರ್ಣ ತಣಿಸಿದ ಹೆಗ್ಗಳಿಕೆ ನಿಮ್ಮ ಕವಿತೆಯದು.. ಓಯಸಿಸ್ ಒಂದು ಪ್ರತೀಕವಾಗಿ ನಿಂತಿದೆ.. ಕವಿ ತನ್ನನ್ನು ತಾನು ಓಯಸಿಸ್ ಎಂದು ಕರೆದುಕೊಂಡರೆ ಓದುಗ ಒಂಟೆಯಾಗುತ್ತಾನೆ, ನಾನೇ ಒಂಟೆಯಾಗಿದ್ದೇನೆ.. ಬಾಯಾರಿ ದಣಿದ ನನ್ನ ಮನಕ್ಕೆ ಸಿಹಿ ನೀರನ್ನು ಧಾರೆ ಎರೆದ ಓಯಸಿಸ್ ನೀವು ನಿಮ್ಮ ಕವಿತೆಯ ಮೂಲಕ.. ನನ್ನ ದಾಹ ತಣಿದ ತೃಪ್ತಿ ನನಗೆ, ಕಾವ್ಯ ಉಣಬಡಿಸಿದ ತೃಪ್ತಿ ನಿಮಗೆ.. ಕೆಲವು ಪಡಿಯಚ್ಚುಗಳಂತು ಅದ್ಭುತವಾಗಿ ಮನದಾಳಕ್ಕೆ ಅಚ್ಚೊತ್ತುತ್ತವೆ..
ಪ್ರತ್ಯುತ್ತರಅಳಿಸಿನನಗೂ ನಗುವೂ, ನೆನೆಯುತ್ತೇನೆ ಒಂಟೆಯನು,
ಹದಿನೈದು ದಿನದ ದಾಹನೀಗಿಸಿದ ತೃಪ್ತಿಗೆ!
ಈ ರೀತಿಯ ಸೂಕ್ಷ್ಮ ಅಭಿವ್ಯಕ್ತಿಗಳನ್ನು ಮೂಡಿಸುವಲ್ಲಿ ನಿಮಗೆ ನೀವೇ ಸಾಟಿ..:)))