ಅಂಗಳದಲೊಂದು ಹಾವು
ಹಸಿರು ಹುಲ್ಲುಸಿರ ಮಧ್ಯೆ ವಿಷ!
ನರಗಳಲಿ ನೆತ್ತರಿಗೆ ಚಳಿ
ಬೆರಳು ನಡುಗುತ್ತದೆ ಬೆದರಿ!
ರಾತ್ರಿ, ನಡುಗತ್ತಲು!
ಒಂಟಿ ಮಿಂಚುಹುಳದ ಬೆಳಕು
ಕಣ್ಣು ಮಿಟುಕಿಸುತ್ತದೆ ಜೀವ
ಹಾವ ನಾಲಗೆಯ ಭಯಕೆ!
ತೆವಳುತ್ತದೆ ಪಾದ, ಮುಂದಿದೆಯೋ ?
ನೋವಿಣುಕುತ್ತದೆ ಮಂಡಿಯಲಿ
ಮೆದುಳಿಗೊಂದಷ್ಟು ಗುಡುಗು
ಹನಿ ಮಳೆ ಕೆನ್ನೆ ಮೇಲೆ!
ರಾತ್ರಿ ಕಳೆದು ಮುಂಜಾವು!
ತಂಪು, ಪೂರ್ವದಲಿ ಕಿರಣ!
ಬೆಳಕುಗಳ ಹೊತ್ತು ಭಾನು!
ಹಾವೆಲ್ಲಿ? ಬಿಲದೊಳಗೆ?!
====
ಚಿತ್ರ ಕೃಪೆ=ಫ್ಲಿಕರ್.ಕಾಂ
ನನಗೆ ಹಾವು ಎಂಬ ಪ್ರತಿಮೆ ಭ್ರಮೆ ಮತ್ತು ನಾವು ಹಗಲುಗನಸುಗಳಲ್ಲಿ ಕಾಣುವ ಅನುಭವಕ್ಕೆ ಬಾರದ ಅವ್ಯಕ್ತ ಭಯದಂತೆ ಕಾಣಿಸಿತು.. ಬೆಳಕು ಅಥವಾ ಸೂರ್ಯ ಎಂಬುದು ಅರಿವಿನಂತೆ ಭಾಸವಾಯ್ತು.. ನಾನು ಹಿಂದೆಯೆ ಹೇಳಿದ್ದೇನೆ ನೀವು ಪ್ರತಿಮೆಗಳನ್ನು ದೃಢವಾಗಿ ನಿಲ್ಲಿಸುವುದನ್ನು ಕರತಲಾಮಲಕ ಮಾಡಿಕೊಂಡಿದ್ದೀರಿ, ಅದು ಈ ಕವಿತೆಯಲ್ಲಿ ಸಂಪೂರ್ಣವಾಗಿ ಬಿಂಬಿತವಾಗಿದೆ.. ಮನವನ್ನು ತಟ್ಟಿ ಎಬ್ಬಿಸುವಂತಹ ಅಭಿವ್ಯಕ್ತಿ ಪುಷ್ಪಣ್ಣ..
ಪ್ರತ್ಯುತ್ತರಅಳಿಸಿಅನುಭವಾಮೃತಂ....ಚೆನ್ನಾಗಿದೆ :-)
ಪ್ರತ್ಯುತ್ತರಅಳಿಸಿಚೆನ್ನಾಗಿದೆ. ಪ್ರತಿಮೆಗಳ ಲೋಕದಲ್ಲಿ ಕಳೆದುಹೋದೆ :-)
ಪ್ರತ್ಯುತ್ತರಅಳಿಸಿmanoharavagide.
ಪ್ರತ್ಯುತ್ತರಅಳಿಸಿ