ಭಾನುವಾರ, ಸೆಪ್ಟೆಂಬರ್ 2, 2012

ಕೊಳವೆಬಾವಿ ಮತ್ತು ಕವಿ!

ಶಬ್ದ ಮಾಡುತ್ತಲೇ ಇದೆ ಯಂತ್ರ
ಮುಂಜಾವಿನಿಂದ ನಡುರಾತ್ರಿವರೆಗೂ
ಹನಿ ಚಿಮ್ಮಲು ಸಾವಿರದಡಿ ಕೊರೆತ!

ಮುನ್ನೂರಕೆ ಬಂದದ್ದೆಲ್ಲ ಬರಿ ಹುಲ್ಲು
ಆರ್ನೂರರ ಆಳಕ್ಕೆಲ್ಲ ಕರಿ ಧೂಳು
ಕೊರೆದಷ್ಟು ಬರಲಿ ಜೇಡಿ ನುಣುಪು!

ಹುಡುಕಬೇಕು ತಳ ಚಿಮ್ಮಲದು ಜಲ
ಬಿಸಿಯೇರದಿರದೇ ಬಸಿಯಲು ನೀರ
ಕೊರೆವ ಕೊಳವೆಗೆ ಕಲ್ಲ ರುಚಿ!

ನಿಟ್ಟುಸಿರು, ಸುಸ್ತು ಯಂತ್ರ
ತಳದಿ ನೀರು ಬರಲೆಂಬ ತವಕ
ಕೊರೆಕೊರೆದು ಚಿಮ್ಮುವ ತನಕ !

ಸ್ವಗತಃ;
ಬರವಿಲ್ಲಿ ಬಸಿರ ಮೋಡವು ಉಸಿರುಬಿಡದೇ
ಕೊರೆಯಲೇ ಬೇಕಲ್ಲ ಹೊಟ್ಟೆ ತಣಿಸಲು
ಸುಸ್ತಾಗಲೊಲ್ಲೆ ಹನಿಚಿಮ್ಮಿಸುವ ಕಾಯಕದಿ!
====
ಚಿತ್ರಕೃಪೆ: ಗೂಗಲ್ ಇಮೇಜಸ್

1 ಕಾಮೆಂಟ್‌:

  1. ಕವಿಯ ಕಷ್ಟ ಮತ್ತು ಅಂತರ್ಜಲ ಅನ್ವೇಷಣೆಯನ್ನು ಸಮರ್ಥವಾಗಿ ಕೊಂಡಿ ಹಾಕಿದ್ದೀರ.

    ಎಷ್ಟು ಕೊರೆದರೂ ಸಿಗದ ನೀರನು
    ಕನಸಿದೆವು ಸುಸ್ತಾದೆವು ಭೂ ಪದ ಪಾತ್ರೆ
    ಹನಿಸಲೊಲ್ಲದು

    ಪ್ರತ್ಯುತ್ತರಅಳಿಸಿ