ಭಾನುವಾರ, ಡಿಸೆಂಬರ್ 2, 2012

ಮಣ್ಣಾಗಬೇಕು!

ತೊಳೆದು ಬಿಡಬೇಕು ಒಳಗೊಳಗೆ
ಕುದಿವ ಹೊಲಸುಗಳ ಹುಟ್ಟಡಗಿಸಿ
ತಿಳಿಯಾಗಬೇಕು ತನುವು ತೆರೆದು!

ಬೆಳೆದು ನಿಲಬೇಕು ಬೆಳಕೊಳಗೆ
ಕತ್ತಲ ಕಸುಬುಗಳ ಕಟ್ಟಲೆಯಿರದೆ
ಸವಿಯಾಗಬೇಕು ಮನವು ಮೆರೆದು!

ಬೆಸೆದು ಬಂಧಗಳ ಒಲವೊಳಗೆ,
ಕಠಿಣ ಕಾಲಗಳ ಮೆಟ್ಟಿಮುರಿದು
ಮೆದುವಾಗಬೇಕು ಹೂವಂತೆ ಬಿರಿದು!

ಹೊಳೆದು ನಗಬೇಕು ಜಗದೊಳಗೆ
ಕಸುವ ಹಿರಿಮೆಗಳ ಪಟ್ಟಗಳಿಸಿ
ಮಣ್ಣಾಗಬೇಕು ಬದುಕು ಸವೆದು!
=====

ಚಿತ್ರಕೃಪೆ:ಗೂಗಲ್ ಇಮೇಜಸ್

4 ಕಾಮೆಂಟ್‌ಗಳು:

  1. ನಿಜವಾದ ಬದುಕನ್ನು ಅರ್ಥೈಸುವ ಈ ಕವನದ ಅಂತಃಸತ್ವ ನನಗೆ ಮೆಚ್ಚುಗೆಯಾಯ್ತು.

    ಪ್ರತ್ಯುತ್ತರಅಳಿಸಿ
  2. ಮಣ್ಣಾಗಬೇಕು ಎಂಬುದು ಒಂದು ವಿಭಿನ್ನವಾದ ಪ್ರಸ್ತುತಿ. ಕವಿತೆ ಹಿಂದಿನಿಂದ ಬೆಳೆದು ನಿಂತಂತಿದೆ! ಮಣ್ಣು, ಮಣ್ಣಿನಿಂದ ರಸವೂ, ರಸದಿಂದ ಸಾರವೂ, ಸಾರದಿಂದ ಹೂವೂ, ಹೂವಿನಿಂದ ಹಣ್ಣೂ, ಹೀಗೆ ಕವಿತೆ ಹಿಂಬದಿಯಿಂದ ಚಲಿಸುತ್ತಿದೆ ಎನಿಸಿತು. ನಿರೂಪಣೆಯಲ್ಲಿ ವಿವಿಧತೆ ಕಾಪಾಡಿಕೊಳ್ಳುವುದೆಂದರೆ ಹೀಗೆ. ಕಡೆಯಲ್ಲಿ ಪಡೆದ ಹಣ್ಣು ಮಾನವನ ಸವಿಯಾದ, ಸತ್ವಯುತವಾದ ಜೀವನವೂ. ಅದನ್ನು ಪಡೆದುಕೊಳ್ಳಲು ರಾಗ, ದ್ವೇಷಗಳ ತುಳಿದು ಒಲವಿನ ಹೋಕಳಿ ಬಳಿದು, ಜೀವನಕ್ಕೆ ಧನಾತ್ಮಕತೆ ತುಂಬುವುದರ ಧ್ಯೋತಕವಾಗಿದೆ ಕವಿತೆ. ಮೆಚ್ಚುಗೆಯಾಯ್ತು ಪುಷ್ಫಣ್ಣ..:)

    ಪ್ರತ್ಯುತ್ತರಅಳಿಸಿ
  3. ಸುಂದರವಾದ ಸಾಲುಗಳು ಮನಸಿಗೆ ಹಾಯ್ ಎನ್ನಿಸುತ್ತದೆ..

    ಪ್ರತ್ಯುತ್ತರಅಳಿಸಿ
  4. ಹೊಳೆದು ನಗಬೇಕು ಜಗದೊಳಗೆ
    ಕಸುವ ಹಿರಿಮೆಗಳ ಪಟ್ಟಗಳಿಸಿ
    ಮಣ್ಣಾಗಬೇಕು ಬದುಕು ಸವೆದು! ಸುಂದರವಾದ ರಚನೆ......

    ಪ್ರತ್ಯುತ್ತರಅಳಿಸಿ