ಭಾನುವಾರ, ಏಪ್ರಿಲ್ 28, 2013

ಕೃತಿ!

ಯಾರೋ ಸಾರನೆರೆಯಬಹುದೆಂದು
ಎಲೆಯಲೊಂದಿಷ್ಟು ಅನ್ನವ
ಗುಡ್ಡೆ ಮಾಡಿಟ್ಟು ಕಾಯುತ್ತಿದ್ದೇನೆ
ಸೌಟುಗಳು ಯಾರ ಕೈಯಲ್ಲೂ ಕಾಣುವುದಿಲ್ಲ!

ಸಾರಿನ್ನೂ ಕುದಿಯುತ್ತಿರಬಹುದೋ?
ಸಾರೊಳಗಿನ ಬೇಳೆಯಿನ್ನೂ ಬೆಂದಿಲ್ಲದಿರದೋ
ಕೇಳಬೇಕೆಂದರಲ್ಲಾರದೂ ಸುಳಿವಿಲ್ಲ....
ಅಪ್ಪಣೆಯ ವಿನಹ ಅಡುಗೆ
ಮನೆಗವಕಾಶವಿಲ್ಲವೆಂಬ ಬೋರ್ಡಿದೆ ಹೊರಗೆ!

ನಾನು ಕಾಯುತ್ತಿಲ್ಲ, ನನ್ನೆಲೆಯೊಳಗಣ ಅನ್ನ,
ಹೊಟ್ಟೆ ಕೇಳುತಿಲ್ಲ, ನಿಜಕೂ ಹಸಿವಿಲ್ಲ ನನಗೆ!
ಎಲೆಯನ್ನ ಖಾಲಿ ಮಾಡುವುದು ಧರ್ಮವೆನಗೆಂದು
ಪಕ್ಕದವರಂದರೆಂದು ಕಾಯುವೇ ಸಾರಿನ ಸಾರಕೆ,
ಸೌಟುಗಳಿಲ್ಲದಿರಬಹುದೆನುವ ಚಿಂತೆ ನನಗಿಲ್ಲ!

====

2 ಕಾಮೆಂಟ್‌ಗಳು:

  1. ಈ ಕ್ಷಣದವರೆಗೂ ನಾನೂ ಕಾಯುತ್ತಿರುವುದೇ ಇದಕ್ಕಾಗಿ, ನೀವು ಬರೆದಂತೆ ಮುಂದೆ ಎಳೆಯಿದೆ ಅದರಲ್ಲಿ ಅನ್ನವಾದರೂ ಇದೆ. ಗೆಳೆಯ ನನ್ನ ಪಾಲಿಗೆ ಬದುಕು ಅಡುಗೆ ಮನೆಯಿರಲಿ, ಮನೆಯೊಳಗೇ ಬರಲು ಅಪ್ಪಣೆ ಇಲ್ಲ ಎನ್ನುತಿದೆ. ಬರೀ ಅನ್ನವಾದರೂ ಸರಿ ಹಾಳು ಮಾಡದೇ ಖಾಲೀ ಮಾಡುವ ನಿಮ್ಮ ಸದಾಶಯ ನನಗೆ ಮಾದರಿಯಾಗಲಿ, ಪ್ರೇರಣೆಯಾಗಲಿ.

    ಪ್ರತ್ಯುತ್ತರಅಳಿಸಿ
  2. ಎಲೆಯ ಮೇಲೆ ಏನೂ ಬಿಡದೆ ಖಾಲಿ ಮಾಡಬೇಕು ಎಂದು ಸಾರಿಗೆ ಮನ ಸುಂದರ.
    ಸಾರು ಕಾಯುತ್ತ "ಸಾರಿಗೆ" ತಪ್ಪಿಸಿಕೊಂಡರೂ ಎಲೆ ಮೇಲೆ ಚೆಲ್ಲಬಾರದು ಎನ್ನುವ ಆಶಯ ಸುಂದರ

    ಪ್ರತ್ಯುತ್ತರಅಳಿಸಿ