ಮೇಲೆಳೆದ ಹೊದಿಕೆಯೊಳಗದರ ನಗು
ಒತ್ತಿದ್ದಷ್ಟು ತಗ್ಗುತ್ತದೆ ಮತ್ತೆ ಹಿಗ್ಗಿ,
ಮೆದುವದು ಮುದವನೀಯುತ್ತದೆರಗಿದೊಡೆ!
ಬಿದ್ದವನಿಗೊಂದಷ್ಟು ನಿದ್ದೆಯ ಸಾಂತ್ವನ
ಮಲಗಿದವನಿಗೊಂದಷ್ಟೊಳಗೊಳಗೆ ತಣಿವು
ಜ್ವರದುರಿ ಕೆಮ್ಮುಗಳಿಗೆಲ್ಲಾರಾಮದಿಂಬು!
ಮರುಗಿ, ಕೊರಗುವವನಿಲ್ಲಿ ಬರಿಯ
ಶಿರವಾನಿಸಿ ದೇಹವನೊರಗಿದರೆ ಕಾಲ ಚಾಚಿ
ಕಣ್ಣುರಿಯಿರದಲ್ಲಿ, ಹೀರಿ ಬಿಸಿ ಹನಿಯ!
ಮರದಮಂಚದಡಿಪಾಯದೊಳು ನಿಂದು
ಬೆಚ್ಚಗಿರಿಸುತ್ತದೆ ಬಹುಪಾಲು,
ಬೇಗನೊಣಗುವುದಿಲ್ಲ ಒದ್ದೆಯಾದೊಡೆ!
ಹತ್ತಿಯದು ಒಳಗೆ, ಮೆತ್ತನೆಯ ಮೆತ್ತೆ
ಮತ್ತೆ ಮತ್ತೆ ತಲೆಯಾನಿಸುತ್ತೇನೆ
ನೋವಾದಾಗಲೆಲ್ಲ, ಬಿಗಿದಪ್ಪಿಕೊಳುತ್ತೇನೆ...
ವ್ಯತ್ಯಾಸವೇನಿಲ್ಲವಿದಕೂ ಮನಕೂ!
===
ಸಖತ್ರಿ ಸರ :-)
ಪ್ರತ್ಯುತ್ತರಅಳಿಸಿನಮ್ಮ ಕಡೆ ರಾಗಿ ಹೊಟ್ಟಿನ ದಿಂಬೂ, ನಾರಿನ ಹಾಸಿಗೆ ಬಳಸುತ್ತೇವೆ ಆಗಲೇ ನಮಗೆ ಸುಖದ ನಿದ್ದೆ.
ಪ್ರತ್ಯುತ್ತರಅಳಿಸಿನಿದ್ದೆಯ ಅವಶ್ಯಕತೆಯನ್ನು ಚೆನ್ನಾಗಿಯೇ ಕಟ್ಟಿಕೊಟ್ಟಿದ್ದೀರಾ.