ಸುತ್ತ ಬಿಳಿಬಣ್ಣದ ನಾಲ್ಕು ಗೋಡೆ,
ಕೊಳವೆ ದೀಪದ ಬೆಳ್ಳಂಬೆಳಗು,
ಗೋಡೆಗೆ ಬಳಿದ ನೀರು ಸುಣ್ಣಕೂ
ಕಣ್ಣು ಮಿಟುಕಿಸುವಾಸೆ..........
ಗಣಕ ಯಂತ್ರದ ಕೀಲಿಮಣೆಯ
ಮೇಲಾಡುತ್ತಿರುವ ಕೈ ಬೆರಳಿನಲೂ
ಉದ್ರೇಕ, ಮನಸು ಮರ್ಕಟ..
ಗಿರಿಶಿಖರಗಳ ನೆನಪು, ಹಾರಾಟ
ಬಾನೆತ್ತರಕೆ, ಮನಸು ಬೆಲ್ಲದ ಮಂಡಿಗೆ,
ಇಲ್ಲಿ ಇರುವೆಗಳು ಒಂದೆರಡಲ್ಲ, ಸಾಲು
ಸಾಲು, ಮುತ್ತುವ ತವಕ.. ಮೆಲ್ಲನೆ
ಸೂರೆಗೊಳ್ಳುವುದೆಂದು?.. ನಗ್ನತೆ
ಬೆಳೆಯುತ್ತಿದೆ ಕನಸ ಹೊತ್ತು....
ಸಾಕಾರದ ದುಷ್ಟ ಗುರಿಯೆಡೆಗೆ
ವಿಫಲ ಪ್ರಯತ್ನ,ವ್ಯರ್ಥತೆಯ ಸುಖ
ಪಡೆದದ್ದು ಅವಳ ಮುಖದ ಚಿತ್ರವ
ಕಣ್ಣ ಪರದೆಯೊಳಗಿಟ್ಟು........
ಈ ಕವನವನ್ನು ಓದುತ್ತ ಇದ್ದಾರೆ ಒಂದು ಚಿತ್ರವನ್ನು ಕಣ್ಣ ಮುಂದೆ ನೋಡಿದ ಅನುಭವ !!!!!
ಪ್ರತ್ಯುತ್ತರಅಳಿಸಿ