ಅಲ್ಲಿ ಪಾಚಿಗಟ್ಟಿದ ಬಾವಿ, ಮೂರಡಿಯ ನೀರು
ಏಡಿ ಕೊರೆದ ತೂತು ಅಲ್ಲಲ್ಲಿ, ಕಪ್ಪೆಗಳ ಗೂಡು
ಲೆಕ್ಕವಿಲ್ಲದ ಹಿಂಡು ಹಿಂಡು ಮೀನುಗಳ ಸಾಲು
ಮೇಲೆ ಶುಭ್ರಾಕಾಶ, ನೀಲ ಬಾನಿನ ಮುಗುಳ್ನಗೆಗೆ
ನೀರು ನೀಲಿಯಾಗಿದೆ, ಪಾಚಿ ಎಂಬುದ ಮರೆತಿದೆ
ತಳ, ಕೆಸರ ತುಂಬಿ ಗಹ ಗಹಿಸಿದ್ದು ಕಾಣಲೇ ಇಲ್ಲ
ದಂಡೆಯಲಿ ಎರಡು ಹಸಿರು ಹುಲ್ಲ ನಗುವಿನಲ್ಲೆಲ್ಲ
ನೀರಹಾವಿನ ಸೀಳುನಾಲಿಗೆಗೂ ಮರಿಮೀನಿನ ರುಚಿ
ವಟಗುಡುವ ಕಪ್ಪೆಯೂ ರಾಗ ಮುದುಡಿಸಿದೆ ಬೆದರಿ
ಕಣ್ಣ ಮಿಟುಕಿಸುವ ಮಿಂಚುಳ್ಳಿಯದೂ ತವಕದ ಗಾಳ
ಕೊಕ್ಕ ನಡುವೆ ಮೀನ ಹೆಕ್ಕಿದ್ದೂ ತಿಳಿಯದಾ ದಾಳ
ರಾಟೆಯೊಳು ಇಳಿಬಿಟ್ಟ ಕೊಡದ ಒಳಗೂ ಮೀನು
ಇಣುಕಿ ಕೂತದ್ದು, ಪುಟ್ಟ ಬಾವಿಯ ಬಿಟ್ಟು, ನೀಲ
ಬಾನಿನ ಮುತ್ತಿಕ್ಕುವ ಆಸೆಗೆ, ಬರಿದಾಗಿ ಹಂಬಲ
ವಿಲ ವಿಲ ಒದ್ದಾಟದ ಕೊನೆಯ ಉಸಿರಿನ ಛಲ
ಹೆಪ್ಪುಗಟ್ಟಿದ್ದು ಕಲ್ಲು ತುಂಬಿದ ನೆಲದೊಳಗೆ.....
ನೀರಹಾವಿನ ಸೀಳುನಾಲಿಗೆಗೂ ಮರಿಮೀನಿನ ರುಚಿ
ಪ್ರತ್ಯುತ್ತರಅಳಿಸಿವಟಗುಡುವ ಕಪ್ಪೆಯೂ ರಾಗ ಮುದುಡಿಸಿದೆ ಬೆದರಿ
ಕಣ್ಣ ಮಿಟುಕಿಸುವ ಮಿಂಚುಳ್ಳಿಯದೂ ತವಕದ ಗಾಳ
ಕೊಕ್ಕ ನಡುವೆ ಮೀನ ಹೆಕ್ಕಿದ್ದೂ ತಿಳಿಯದಾ ದಾಳ.... nice lines ...liked it
ಚೆನ್ನಾಗಿದೆ
ಪ್ರತ್ಯುತ್ತರಅಳಿಸಿದಾಳದ ವಿವಧ ಪ್ರಕಾರಗಳ ಒಳ ಹೊಕ್ಕಿರುವ ಕವಿತೆ ಇದು.. ತುಂಬಾ ಅರ್ಥಪೂರ್ಣವೆನಿಸುವಂತೆ ಮೂಡಿ ನಿಂತಿದೆ ಕವಿತೆಯ ಹಂದರ.. ಜೀವಗಳ ಕೊಕ್ಕಿಗೆ ಗಾಳ ಹಾಕಿ ಸಮಯಕ್ಕೊಂದು ದಾಳ ಉರುಳಿಸುವ ವಿಧಿಯ ರುದ್ರನರ್ತನದ ಪರಿಚಯ ಮಾಡಿಸಿದೆ ಕವಿತೆ.. ಮಾರ್ಮಿಕಾಭಿವ್ಯಕ್ತಿಗಳನ್ನು ಅದ್ಭುತ ಪ್ರತಿಮೆಗಳ ಮೂಲಕ ಸಮೀಕರಿಸುವ ನಿಮ್ಮ ಪ್ರೌಢಿಮೆಗೆ ಹಿಂದೆಯೇ ಮನಮೆಚ್ಚಿ ಹೊಗಳಿದ್ದೆ ಇಂದು ಕರತಾಡನದ ಮೂಲಕ ಅಭಿನಂದಿಸುತ್ತೇನೆ.. ಓದುಗ ಕವಿತೆಯನ್ನು ಓದುತ್ತಾ ಗಾಳಕ್ಕೆ ಸಿಕ್ಕಿ ನರಳುವ ಮೀನಾಗಿದ್ದು ಕವಿಯ ಹೆಗ್ಗಳಿಕೆ.. ತುಂಬಾ ಚೆನ್ನಾಗಿದೆ ಕವಿತೆ..:)
ಪ್ರತ್ಯುತ್ತರಅಳಿಸಿಸತ್ವಪೂರ್ಣ ಹೂರಣ. ದಾಳದ ಪರಿಧಿಯ ಹೊರಗೂ ಚಿತ್ರಿಸಿದ ಭಾವಗಳು ಹಲವಾರು.
ಪ್ರತ್ಯುತ್ತರಅಳಿಸಿತುಂಬಾ ತುಂಬಾ ಸೊಗಸಾದ ಕವನ ಸರ್ .. ಹಾಗೂ ಇದನ್ನು ರಾಜಕೀಯ , ಸಿನಿಮಾ , ಕ್ರೀಡೆ & ಇತರ ಯಾವುದೇ ಗುಂಪುಗಳಿಗೂ ಕೂಡ ಉತ್ತಮವಾಗಿ ಹೋಲಿಸಬಹುದು .. ಅತ್ಯುತ್ತಮ ಕಲ್ಪನೆ .. :)
ಪ್ರತ್ಯುತ್ತರಅಳಿಸಿ