ಸೋತು ನಾ ಮೌನಿಯಲ್ಲ
ಹಿಂಜರಿಯಲು ನಾ ಸೋತಿಲ್ಲ
ಸಾವಿರದೊಂದರ್ಥದ ಮೌನಕೆ
ಶರಣಾದೆ ಈ ಲೋಕದ ನಡೆಗೆ!
ಮೌನವೇ ಪ್ರಿಯತಮೆಯೆನಗೆ
ನೋವ ತುಂಬಿದ ಮನಸಿನ
ಕೆನ್ನೆಗೆ ಸಿಹಿಮುತ್ತನೀವಾಕೆ
ಕದಡದಿರಲೆಂದು ಕಷ್ಟ
ನನ್ನೆದೆಯ ಕದ ತಟ್ಟುವಾಕೆ
ನೋವಿನ ಬೇಟೆಗೆ ಮೌನದ ಮೊರೆ ಹೊಕ್ಕೆ
ದುಃಖದ ಬಲೆಯೊಳಗೆ ಬೀಳದಿರಲೆಂದು
ಸಂತಸ ಹಾರಿಹೋಗದಿರಲೆಂದು
ಸಾವಿನ ಸದ್ದ ತರದಿರಲೆಂದು
ಭಯವಿಲ್ಲ ಮೌನದಾ ಮನದೊಳಗೆ
ಧೈರ್ಯ ಮುದುಡದಿರಲೆಂದು ಮೌನ
ಕಣ್ಣ ಹನಿ ಜಾರದಿರಲೆಂದು ಮೌನ
ಮನದ ಅಹಮಿಕೆಗೆ ಒದೆಯಲೆಂದು
ಅಳಿದುಳಿದ ಭಾವ ಬಾಡದಿರಲೆಂದು
ಅರಿವಿದೆ, ಬೆದರಿಲ್ಲ ನಾವಿಕನು
ಬದುಕು ನಂಬಿಕೆಯ ಪರಿ ಅರಿತೆ
ನೋವಿನೊಲುಮೆಯ ಅಲೆಯಲಿ ತೇಲಿ
ನೌಕೆ ಎತ್ತರೆತ್ತರ ಸಾಗುವಾ ಇಚ್ಚೆಯಾ
ತೊರೆದು ದಡ ಸೇರಿದರೆ ಸಾಕೆಂಬ
ಬಯಕೆ ಮೌನವೆತ್ತ ಮನದ ನಾವಿಕನಿಗೆ!
ನನಗೆ ಖುಷಿ ಆಗುವುದು ನಿಮ್ಮ ತಾಳ್ಮೆ..ಕಾವ್ಯಕ್ಕೆ ಇದು ಉಸಿರು ಇದ್ದ ಹಾಗೆ. ಅದು ನವ ಮಾಸ ತನ್ನ ಉದರದಲ್ಲಿ ಹೊತ್ತು ನೆಲಕ್ಕೆ ಬೆರಳಿಡಿದು ನಡೆಸುವ ಅಮ್ಮನಿಗೇ ಮಾತ್ರ ಅದರ ಸತ್ಯ ಗೊತ್ತು. ಈ ಕವಿತೆಯಲ್ಲಿ ಆರಂಭದಲ್ಲಿ ಸ್ಫುರಿಸಿದ ಪ್ರತಿಮೆ ಅಂತ್ಯಕ್ಕೆ ಯಾವ ರೀತಿ ಬೆಳೆಯುತ್ತಾ ಬಂತು ಅನ್ನೋದಕ್ಕೆ ಉತ್ತರಕ್ಕೆ ತಿಣುಕಾಡಿದ್ದೇನೆ. ಅಷ್ಟು ನಾಜೂಕಾಗಿ ಸಾಲುಗಳಿಗೆ ನೀರುಣಿಸಿದ್ದೀರಿ. ಉತ್ತಮ ಕವಿತೆ ಮತ್ತು ಭಾವ ಸಮ್ಮಿಲನತೆ. ಶುಭವಾಗಲಿ.
ಪ್ರತ್ಯುತ್ತರಅಳಿಸಿಈ ದಿನದ ಅತ್ಯುತ್ತಮ ಕವನವಿದು.
ಪ್ರತ್ಯುತ್ತರಅಳಿಸಿಭಾವ ತೀವ್ರತೆ ಮತ್ತು ಅರ್ಪಣಾಭಾವದ ಕಾವ್ಯ ಪ್ರಯೋಗ.
ಇಷ್ಟಾದರೂ ಆಕೆ ಕರಗಲಿಲ್ಲವೆಂದರೆ, ನಾವು ಕನ್ನಡ ಬ್ಲಾಗಿಗರು ಆಕೆಯ ಮನೆ ಎದುರು ಮುಷ್ಕರ ಕೂರ ಬೇಕಾಗುತ್ತೆ ಅಂತ ಎಚ್ಚರಿಸಿ ಬಿಡಿ.
ನನ್ನ ಬ್ಲಾಗಿಗೂ ಸ್ವಾಗತ.
"ಮನದ ಅಹಮಿಕೆಗೆ ಒದೆಯಲೆಂದು"
ಪ್ರತ್ಯುತ್ತರಅಳಿಸಿಸುಂದರ ಕವಿತೆಯ ಸುಂದರ ಸಾಲುಗಳು