ತಿಳಿನೀರ ತೊರೆ ಹರಿವ ಪರಿಯು ನಿನ್ನ ಮನಸು
ಹನಿ ಹನಿಯೂ ತಂಪು, ಕ್ಷಣ ಕ್ಷಣದ ಹರಿವಿನಲೂ
ನಿನ್ನೊಲವ ಧಾರೆಯಲಿ ಮೀಯಲೇನು?
ಬಿಳಿಯ ಮೋಡದ ತಿಳಿಯು ನಿನ್ನ ನೋಟವು
ಮಧುರ ಅತಿ ಮಧುರ, ಭಾವ ಭಾವಗಳಲೂ
ನಿನ್ನ ಮನಸ ತೆಕ್ಕೆಯ ಒಳಗೆ ತೂರಲೇನು?
ಹರಿವ ನದಿತೆರೆಯ ತೆರದಿ ಪುಟಿವ ನಿನ್ನ ನಗುವು
ನಯನ ಮನೋಹರ, ಅಲೆ ಅಲೆಗಳಲೂ
ನಿನ್ನೆದೆಯ ತಿಳಿಯಲೆಯೊಳಗೆ ಧುಮುಕಲೇನು?
ನಿನ್ನಪ್ಪುಗೆಯ ಬಂಧನದಲಿ ಬಂಧಿ ನನ್ನ ಮನಸು
ತೊದಲ ಸವಿ ಸವಿಯ ಮನದ ಹಿತ ಹಿತದಲೂ
ಬೆರೆತು ನಿನ್ನ ತೋಳಿನಪ್ಪುಗೆಯ ತೊಟ್ಟಿಲಲಿ
ತೂಗಬಿಡಲೇನು ಮನವ? ನಾ ಮಗುವಾಗಲೇನು?
***
ಮತ್ತೇ ಮಗುವಾಗುವಾ ಮನಸು :) ಚೆನ್ನಾಗಿದೆ ಬಯಕೆ ..
ಪ್ರತ್ಯುತ್ತರಅಳಿಸಿPrasad V Murthy ಅದ್ಭುತವಾದ ಕವಿತೆ ಪುಷ್ಪಣ್ಣ..:))) ಮಗು ಮನಸ್ಸಿನ ನಿಷ್ಕಲ್ಮಶ ಭಾವಗಳನ್ನು ಹೆಕ್ಕಿ ತೆಗೆದು ಸುಂದರ ತೋರಣವಾಗಿಸಿದ್ದೀರಿ, ಪ್ರತಿಯೊಂದು ಸಾಲುಗಳೂ ಆ ಮಗುವಿನ ಮನಸ್ಸಿನ ಆಂತರಿಕ ಸೌಂದರ್ಯವನ್ನು ವರ್ಣಿಸಿ ಅಸ್ವಾದನೆಯ ಮನಸ್ಸಿನೊಳಗೆ ಆ ಭಾವಗಳನ್ನು ಬಿತ್ತುವ ಪ್ರಯತ್ನ ಮಾಡಿದೆ.. ಕವಿತೆ ನೇಯುವಾಗಿನ ನಿಮ್ಮ ಕಲ್ಪನೆಗಳು ಮತ್ತು ಉಪಮೆಗಳು ನಿಮ್ಮಲ್ಲಿನ ಪ್ರೌಢ ಕವಿಯನ್ನು ಹೊರಗೆಳೆದು ನಿಲ್ಲಿಸಿವೆ.. ನಿಮ್ಮ ಸೃಜನಶೀಲತೆ ಮಗುವಿನ ಮನಸ್ಸಿನೊಳಗಿನ ಹಾಲುಮನಸ್ಸಿನ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುವಲ್ಲಿ ಸಂಪೂರ್ಣ ಅಂಕ ಸಂಪಾದಿಸಿಕೊಂಡಿದೆ.. ಇಂತಹ ಕವಿತೆಗಳನ್ನು ಕಟ್ಟುವಾಗ ಕವಿಮನಸ್ಸೂ ಮಗುವಿನ ಮುಗ್ಧ ಮನಸ್ಸಾಗಿ ಆ ಮುಗ್ಧ ಮನಸ್ಸು ಅನುಭವಿಸುವ ಆನಂದವನ್ನು ಅಸ್ವಾಧಿಸಿ ಅವುಗಳಿಗೆ ಲೇನಿಯೆಂಬ ಕುಂಚದಿಂದ ಕವಿತೆಗೆ ಬಣ್ಣ ತುಂಬ ಬೇಕಾಗುತ್ತದೆ ಅಲ್ಲಿದೆ ಕವಿಯ ಸಾರ್ಥಕತೆ ಆ ವಿಷಯದಲ್ಲಿ ನೀವೊಬ್ಬ ಪ್ರಬುದ್ಧ ಕವಿ ಎಂಬುದನ್ನು ಕವಿತೆ ಸಾರುತ್ತದೆ..:)))
ಪ್ರತ್ಯುತ್ತರಅಳಿಸಿನಿನ್ನಪ್ಪುಗೆಯ ಬಂಧನದಲಿ ಬಂಧಿ ನನ್ನ ಮನಸು
ತೊದಲ ಸವಿ ಸವಿಯ ಮನದ ಹಿತ ಹಿತದಲೂ
ಬೆರೆತು ನಿನ್ನ ತೋಳಿನಪ್ಪುಗೆಯ ತೊಟ್ಟಿಲಲಿ
ತೂಗಬಿಡಲೇನು ಮನವ? ನಾ ಮಗುವಾಗಲೇನು?
ಈ ಸಾಲುಗಳು ಮನಸ್ಸಿನಲ್ಲುಳಿಯುತ್ತವೆ ಮತ್ತು ಆ ಕಲ್ಪನೆಯಲ್ಲಿನ ಭಾವ ಮನಸ್ಸಿಗೆ ಹಿತವೆನಿಸಿ ನನ್ನ ಮನಸ್ಸನ್ನು ಆ ಮಗುವಿನ ತೋಳಿನಪ್ಪುಗೆಯ ತೊಟ್ಟಿಲ್ಲಿಟ್ಟು ತೂಗಿದಂತೆನಿಸಿ, ಹಾಯ್ ಎನಿಸುತ್ತದೆ..:)))
ನಾವು ಇನ್ನು ಮಕ್ಕಳಾಗಿದ್ದರೇನೇ ಚೆಂದ, ಮುಗ್ಧ ಮನಸ್ಸು,
ಪ್ರತ್ಯುತ್ತರಅಳಿಸಿತೊದಲ ನುಡಿಯ ಆ ಮಾತುಗಳು, ಹೆಜ್ಜೆಯೂರಿ ನಡೆಯುವ ಪ್ರಯತ್ನ.
ಮನೆಯ ದೀಪವಾಗಿ ಮನಸ್ಸಿನಿ ಮುದ ನೀಡುವ ಆ ಕಂದನ ಎಷ್ಟು ಕೊಂಡಾಡಿದರೂ ಸಾಲದು.
ಈ ಕವಿತೆಯನ್ನು ಬೆಳಗ್ಗಿನಿಂದ ಹುಡುಕುತ್ತಿದ್ದೆ. ಅಚಾನಕ್ಕಾಗಿ ಕೈಗೆ ಬಂದಿದೆ. ಮಕ್ಕಳ ಬಗ್ಗೆ ಏನೇ ಬರೆದರೂ ಚೆಂದವೇ. ಈ ಕವಿತೆಯಲ್ಲಿ ನನಗೆ ಸಿಕ್ಕಿದ್ದು ಒಂದು ಕೇಜಿ ಬೆಣ್ಣೆ. ತುಂಬಾ ಸುಂದರವಾದ ನವಿರು ಭಾವಗಳು, ಮಗುವಿನ ಮೃದು ಸ್ಪರ್ಶದಷ್ಟು ಕೋಮಲವಾಗಿದೆ. ವಂದನೆಗಳು.
ಪ್ರತ್ಯುತ್ತರಅಳಿಸಿ