ಶನಿವಾರ, ಅಕ್ಟೋಬರ್ 6, 2012

ನದಿ ಹರಿದು!

ತುಣುಕು ಹನಿಯ ಒಡಲಿಗೆ ಮಳೆಯ ಮುತ್ತುಗಳು
ಕೋಡಿ ಹರಿದು ನದಿ ಬೆಡಗಿನಲಿ ನೀರ ಮೆರವಣಿಗೆ!
ಏರುತಗ್ಗುಗಳಲ್ಲೆಲ್ಲ ಏರಿಳಿತ, ಅಬ್ಬರದ ಜಲಧಾರೆ,
ಬೆಟ್ಟಗಳೆರಡರ ನಡುವೆ ಧುಮುಕಿದಂತಲ್ಲಿ ಕಣಿವೆ!

ತಿರುವಿನಲಿ ಇಬ್ಭಾಗ, ಮಗದೊಮ್ಮೆ ಸಮಾಗಮ
ಬುಡಮೇಲು ಕೆಲವೊಮ್ಮೆ ಹೊಸರುಚಿಯ ಕಾವು!
ಒಳಹರಿವ ತಿಕ್ಕಾಟದಲಿ ಕಲ್ಲುಬಂಡೆಯ ಸವೆತ
ಬೆಚ್ಚನೆಯ ಓಟಕಿಲ್ಲಿ ತಡೆಯಿಲ್ಲ, ತಕರಾರಿಲ್ಲ!

ಊರು ಮುಳುಗಿಸಿ ಕಟ್ಟೆಯೊಳು ನೀರ ಬಸಿರು
ಕಾಲುವೆಯೊಳು ಹರಿವ ನೀರಿಗೆ ರೈತ ಜನನ!
ಬಂಜೆಯಾಗಲಿಲ್ಲ ಹೊಲಗದ್ದೆಗಳು, ನೀರ ಫಲಕೆ
ಎರಡೆಯೆಳೆಯ ಪೈರು ಹಸಿರ ಉಸಿರಿನ ಹೂರಣ!
======
ಚಿತ್ರಕೃಪೆ: ಗೂಗಲ್ ಇಮೇಜಸ್

4 ಕಾಮೆಂಟ್‌ಗಳು:

  1. ಚೌಟರೆ ಅದ್ಭುತವಾಗಿ ಮೂಡಿ ಬಂದಿದೆ. ಇತ್ತೀಚೆಗೆ ತಮ್ಮ ಬರವಣಿಗೆಗಳು ಬಹಳ ಪಕ್ವವಾಗುತ್ತಿವೆ. ಕನ್ನಡವನ್ನು ಸಮರ್ಥವಾಗಿ ಬಳಸಿಕೊಳ್ಳುವ ಶಕ್ತಿ ತಮ್ಮಲ್ಲಿದೆ. ಅದರೊಂದಿಗೆ ತಮ್ಮ ಕವಿ ಮನಸ್ಸು ಸಹಕರಿಸುತ್ತಿದೆ. ನಿಮ್ಮ ಪಯಣ ಅಡೆ ತಡೆಗಳಿಲ್ಲದೆ ಮುಂದುವರೆಯಲಿ.

    ಪ್ರತ್ಯುತ್ತರಅಳಿಸಿ
  2. ಮನ ಸೂರೆಗೊಳ್ಳುವ ಸಾಲುಗಳು., ಈ ಸಾಲುಗಳು ಕೇವಲ ನದಿಯ ಬಗೆಗಿನ ವರ್ಣನೆಯಲ್ಲದೆ., ಬದುಕಿನ ತುಲನೆಯೆಂಬಂತೆ ಗೋಚರಿಸಿತು. ಶುಭವಾಗಲಿ ಪುಷ್ಪಣ್ಣ.

    ಪ್ರತ್ಯುತ್ತರಅಳಿಸಿ
  3. ನನ್ನ ಅತ್ಯಂತ ಪ್ರೀತಿಯ ವಸ್ತು ನದಿ.

    ಈ ಕವನದಲ್ಲಿ ಅವಳ ಎಲ್ಲ ವಯ್ಯರಗಳನ್ನೂ, ಬಳಕುಗಳನ್ನು ಮತ್ತು ಉಪಯುಕ್ತತೆಯನ್ನೂ ಮನಗಾಣಿಸಿದ್ದೀರ.

    ಸುಲಲಿತ ಕಾವ್ಯ ಶೈಲಿ.

    ಪ್ರತ್ಯುತ್ತರಅಳಿಸಿ
  4. ಮನ ಮೋಹಕವಾದ ಸುಂದರ ಭಾವಸ್ಪುರಣ ಕವಿತೆ.ಚಂದನೆಯ ಅಲಂಕಾರಗಳು ಮನ ಕೋಮಲತೆಗೊಳಿಸಿವೆ.ಮಳೆಗಾಲದ ಸದ್ದಿಗೆ ಅರಳಿ ನಿಂದ ಪುಷ್ಪ ಗೀತೆ ಇದು.ಮತ್ತೆ ಮತ್ತೆ ಓದಿಸಿಕೊಳ್ಳುವ ಇಂಥ ಕವಿತೆಗಳು ನೂರ್ಕಾಲ ಬಾಳುವವು.ತುಂಬಾ ಇಷ್ಟವಾಗುವ ಸಾರ್ವಕಾಲಿಕ ಕವಿತೆ ಪುಷ್ಪಣ್ಣ."ಬೆಟ್ಟಗಳೆರಡರ ನಡುವೆ ಧುಮುಕಿದಂತಲ್ಲಿ ಕಣಿವೆ" ಈ ಸಾಲು , "ಬೆಟ್ಟಗಳೆರಡರ ನಡುವೆ ಧುಮುಕಿದಂತೆಲ್ಲ ಕಣಿವೆ" ಎಂದಾಗಬೇಕೆ? ಪರಿಶೀಲಿಸಿ.

    ಪ್ರತ್ಯುತ್ತರಅಳಿಸಿ