ಭಾನುವಾರ, ಅಕ್ಟೋಬರ್ 28, 2012

ಹೂವಾದವರು!

ಇನ್ನೂ ಕತ್ತಲು ಭಾನಿರದ ಬಾನು
ಮೂಡಣದ ಕತ್ತಲಲಿ ಬೆಳಕು ಬಿರಿದಂತೆ
ಹೂವ ನಗು, ಹಸಿರ ಗಿಡದಿ ಸೂರ್ಯ!

ಬಿರಿದರಳಿ ಪುಷ್ಪ, ಯಾರ ಮುಡಿಗೋ?
ಅರೆಘಳಿಗೆ ಅರಿವಿರದಂತೆ ಘಮದಚ್ಚರಿ!
ಮನವ ಕಲಕಿ ಬರಸೆಳೆದು ನಾನಾತ್ಮೀಯ!

ಬಿರಿದಿದ್ದಾನೆ ಭಾನು ಬಿಸಿಲ ನಗು ಬಾನು,
ಅರಳಿ ನಿಂತ ಬದುಕರೆಘಳಿಗೆ ಬಸವಳಿದು,
ಬಾಡಿ ನಿಂತಾಗ, ಗೆಲ್ಲಿಗೂ ಭಾರ!

ಎಲೆ ದೂರ? ಹಸಿರ ತೊಟ್ಟು ಬಿಟ್ಟು
ಬಾಡಿದೆಸಳು ಬುವಿಗೆ, ಅಲ್ಲಿ ಮಣ್ಣು,
ಮುಚ್ಚಿ ಅರೆ ಕ್ಷಣ ಕಣ್ಣು, ಕಣ್ಣೀರು!
======

1 ಕಾಮೆಂಟ್‌:

  1. ಹೂವಿನ ದಿನ ಚಕ್ರವೂ ನಮ್ಮ ಬದುಕೂ ಬಲು ಸೌಮ್ಯದ ಹೋಲಿಕೆ. ಅವಾದರೂ ಅರಳುತ್ತವೆ, ಮುಡಿದರೆ ನಗುತ್ತವೆ. ನಾನಾರಿಗಾದೆನೋ?

    ಪ್ರತ್ಯುತ್ತರಅಳಿಸಿ