ಸೋಮವಾರ, ಆಗಸ್ಟ್ 5, 2013

ಹಸಿವ-ಗುರಿ!

ಹಸಿವ ಬೆನ್ನ ಹತ್ತಿ ಹುಲ್ಲನರಸುತ್ತಾ
ಬಯಲಿಗಿಳಿದಿದ್ದೇವೆ ಬರಡಿಲ್ಲ ನೆಲ!
ಮೊಳೆತಿರಬಹುದಲ್ಲಿ ಹಸಿರಚಿಗುರು,
ಮೋಡಗಳಲ್ಲಿ ಹನಿಯಾಗಿ ಮುತ್ತಿಕ್ಕಿ!

ಹರಿವ ತೊರೆಗಳ ದಾಟಿ ಜಿಗಿದು
ನಡುವ ಬೇಲಿಯೊಳು ನುಸುಳಿ
ಹುಡುಕಬೇಕಲ್ಲಿ ಬದುಕ ಮುಗುಳ,
ಮಣ್ಣೊಳಗಿಂದೆದ್ದ ಮೆಲ್ಲುಬಳ್ಳಿ!

ಮೆರೆಯುವಂತಿಲ್ಲ ಬರಿಯ ನಡೆಯಲ್ಲಿ
ಮರೆಯಾಗಬಹುದುಸಿರು ಬಳಲಿ,
ಮರಿಯಾಸೆ ಮನದೊಳಗೆ ಮರಳಿ,
ಹೊರಳಿಯಿರಬಹುದೆಂಬ ಹರುಷದಲಿ!

=====

2 ಕಾಮೆಂಟ್‌ಗಳು:

  1. ಅವಶ್ಯಕತೆಗಳು ಜೀವಿಯನ್ನು ಕೆಲಸಕ್ಕೆ ಹಚ್ಚುತ್ತವೆ. ಹಸಿವಿನ ಅಗಾಧತೆ ಹರಿವ ತೊರೆಗಳ ದಾಟಿ ಜಿಗಿಸುತ್ತೆ ನಮ್ಮನ್ನೂ...

    ಪ್ರತ್ಯುತ್ತರಅಳಿಸಿ
  2. ಚೆಂದ ಇದೆ ಪುಷ್ಪಣ್ಣ.. ಬಹುದಿನಗಳ ನಂತರ ನಿಮ್ಮ ಬ್ಲಾಗಿಗೆ ಭೇಟಿ ನೀಡುತ್ತಿದ್ದೇನೆ.. ಖುಷಿಯಾಯ್ತು..

    ಪ್ರತ್ಯುತ್ತರಅಳಿಸಿ