ಶುಕ್ರವಾರ, ಮಾರ್ಚ್ 16, 2012

ಮತ್ತೆ ಬಾರದಿರು!

ಹೊತ್ತು ತರದಿರು ಮತ್ತೆ ದುರ್ಬರಗಳ ಮೆತ್ತೆ,
ಹನಿಯಿರದು ಕಣ್ಣೊಳಗೆ ಬರಿದು ಬರಡು
ಕೊನೆಯಾಗಿದೆ ಕಂಡ ಭಾವಗಳ ಕನಸು!
ಮತ್ತೆ ಬಾರದಿರು, ಬರಡೀಗ ಈ ಮನಸು!

ಕಣ್ಣೀರ ಕಡಲೊಳಗೆ ಮುಳುಗಿದ ಕೆನ್ನೆ
ಒಲವ ಚರ್ಮವೂ ಸುಕ್ಕು, ಒಣ ತುಟಿಯು
ಬಣಗುಡುವ ಮೆದುಳು ಹರಿವ ನೆತ್ತರು ನಿಂತು!

ತಲೆಕೆರೆವೆ ಅಲ್ಲಲ್ಲಿ ನೋವುಗಳ ಉಂಡು
ಎಳೆವ ಉಸಿರಲೂ ಬಿಸಿಯ ಕಾವ ಬುಗ್ಗೆ
ತಣ್ಣಗಾವುದಿಲ್ಲಿ ನೊಂದು ಬೆಂದ ಮನಕೆ?

ಮುರುಟಿಹೋದೀತು ಮಿಡಿವ ಹಿಡಿಜೀವ,
ಮರುಗದಿರು ಮನವೇ, ಮುದುಡದಿರು ನೀನು
ಮರಳಿ ತರದಿರು ನೋವ ಬದುಕಿನಂಗಳಕೆ!


2 ಕಾಮೆಂಟ್‌ಗಳು:

  1. ಸರ್ ಇದು ಭಾವನಾತ್ಮಕ .. :)
    ಮನಸ್ಸಿನಾಳದ ಭಾವನೆಗಳ ಅನಾವರಣ ಸೊಗಸಾಗಿದೆ.. ವಿಷಯ ವಿವರಣೆ ಅರ್ಥಪೂರ್ಣವಾಗಿದೆ.. :)

    ಪ್ರತ್ಯುತ್ತರಅಳಿಸಿ
  2. ಸದಾಶಯ ಮೊದಲು ಸೆಳೆಯಿತು.

    ಯಾರೂ ಸೋಲಬಾರದು ಗೆಳೆಯ. ಗೆಲುವು ನಿಮ್ಮ ನಮ್ಮೆಲ್ಲರ ದಿನ ನಿತ್ಯದ ಪ್ರಾಪ್ತಿಯಾಗಲಿ.

    ಪ್ರತ್ಯುತ್ತರಅಳಿಸಿ