ಮೂಡಣದಲಿ ಬಾನ ಯೋನಿ ಗರ್ಭವ
ಸೀಳಿ ಭಾನು ತಾನು ಮುಗುಳ್ನಕ್ಕಿದ್ದ
ಕಡುಕೆಂಪಡರಿತ್ತು ಅವಳ ಕೆನ್ನೆ ನಾಚಿ
ನಿತ್ಯವೂ ಅವಳು ಭಾಸ್ಕರನ ಹಡೆದವ್ವ
ನಡು ಮಧ್ಯಾಹ್ನ, ಬಿಸಿಲ ಬುಗ್ಗೆಯ ಬೆಂಕಿ
ಸುಡುತ್ತಾನೆ ಅವಳೆದೆಯ ನೆನಪಿಲ್ಲದಂತೆ
ಆದರವಳು ಸಹನಾಮೂರ್ತಿ, ಅದೇ ನೀಲವರ್ಣ
ಮತ್ತೆ ಕರುಣಾಮಯಿ, ಇಳಿಬಿಸಿಲ ಸಿಂಚನ
ಅವಳ ತೆಕ್ಕೆಗಳ ತೊಟ್ಟಿಲೊಳಗೆ ಜಾರಿ
ಕರಗುತ್ತಾನೆ, ಸಂಜೆಯ ರಸದಿಂಚರ
ಅವಳೋ, ಆ ತಾಯಿ ಹೃದಯ ಮತ್ತೆ
ರಂಗೇರುತ್ತದೆ ಉರಿ ಬಿಸಿಲ ಮರೆತು...!
======
ಚಿತ್ರಕೃಪೆ: allfreelogo.com
ಅದ್ಭುತ ಕಲ್ಪನೆ. ಬಾನನ್ನು ಭಾಸ್ಕರನ ಅಮ್ಮನಿಗೆ ಹೋಲಿಸಿದ ರೀತಿ ಚೆನ್ನಾಗಿದೆ.. ಚಿತ್ರವೂ ಪೂರಕವಾಗಿದೆ... ಉತ್ತಮ ಕವನ...
ಪ್ರತ್ಯುತ್ತರಅಳಿಸಿಉತ್ತಮ ಕವಿತೆ...ಆದರೆ, ಮೂಡಣ ಬಾನ ಯೋನಿಗರ್ಭವ ಸೀಳಿ ಭಾನು ಮುಗುಳ್ನಕ್ಕದ್ದು ಸುಂದರ ಕಲ್ಪನೆ..ಕಡು ಕೆಂಪಡರುವುದೂ ಕೂಡಾ ಪ್ರಸವದ ಹೊತ್ತಿನಲ್ಲಿ ಅಥವಾ ನಂತರ. ಆದರೆ ಪ್ರಸವದ ನೋವಿಂದ ನಿಟ್ಟುಸಿರಿನ ನಿರಾಳತೆಯೆಡೆಗೆ...ಆ ನಂತರ ತಾಯ್ತನದ ಸಂತಸದೆಡೆಗೆ ಸರಿವ ’ಮುಗಿಲಿನ ಕೆನ್ನೆಯಲಿ ನಾಚಿಕೆ’ ಸರಿಯಲ್ಲವೆನೋ ಎಂಬುದು ನನ್ನ ಅಭಿಪ್ರಾಯ..
ಪ್ರತ್ಯುತ್ತರಅಳಿಸಿವಿಭಿನ್ನವಾದ ಪ್ರಸ್ತುತಿ ಪುಷ್ಪಣ್ಣ. ಕಲ್ಪನಾತೀತ ಸಂಬಂಧವನ್ನು ಹೆಕ್ಕಿದ್ದೀರಿ ಬುವಿ ಮತ್ತು ಭಾಸ್ಕರನ ನಡುವೆ! ಅವರಿಬ್ಬರಲ್ಲಿ ಪ್ರೇಮಿಗಳನ್ನಷ್ಟೇ ಕಂಡಿದ್ದ ಕಣ್ಣಿಗೆ ಈ ಪರಿಯ ಪ್ರಸ್ತುತಿ ಭಿನ್ನವೆನಿಸುತ್ತದೆ. ಭೂದೇವಿಯ ತಾಯಿ ಮಮತೆಯನ್ನು ಅಭಿವ್ಯಕ್ತಿಸಿರುವ ಪರಿ ಸೋಜಿಗವೆನಿಸುತ್ತದೆ.
ಪ್ರತ್ಯುತ್ತರಅಳಿಸಿ